Sunday, January 10, 2010

ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!



ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿದ್ದ ಭೂತ .....!!!!!


ಹೌದು ಎರಡು ದಿನದಿಂದ ನನ್ನ ನಿದ್ದೆ ಕೆಡಿಸಿದ ಭೂತ ಮತ್ತೆ ಆದರೆ ಚೆಸ್ಟೆ ಆಟ ಕೊನೆಗೂ ನನ್ನ ಕೈ ಗೆ ಸಿಕ್ಕಿ ಬಿತ್ತು....ಕೊನೆಗೆ ನಾನೇ ಗೆದ್ದೇ....!!!!

ನಿಜ ಹೇಳಬೇಕು ಅಂದ್ರೆ ನನಗೆ ಈ ಭೂತ ದೆವ್ವ ಇದರಲ್ಲಿ ನಂಬಿಕೆ ಇಲ್ಲ... ಆದರೆ ಇಂಥ ಫಿಲಂಸ್ ಅನ್ನು ತುಂಬ ಚೆನ್ನಾಗಿ ನೋಡ್ತೇನೆ.....actually ನಾನು ಚಿಕ್ಕವ ನಿದ್ದಾಗ್ಲಿಂದ ,,,ಇದರ ಬಗ್ಗೆ ಸ್ವಲ್ಪ ಜಾಸ್ತಿ ನೆ ಆಸಕ್ತಿ ಇತ್ತು,,, ಎಲ್ಲರಿಗೂ, ದೆವ್ವದ ಕತೆ ಹೇಳಿ (ರೀಲು ಬಿಟ್ಟು ) ಚೆನ್ನಾಗಿ ಹೆದರಿಸ್ತಾ ಇದ್ದೆ ....

ಇವಾಗ ಇದರಲ್ಲಿ ಅಸ್ತೊಂದ್ ಆಸಕ್ತಿ ಇಲ್ಲ, ನನಗೆ ಇರೋ ಪ್ರಾಬ್ಲಮ್ ನೆ ಯೋಚನೆ ಮಾಡೋಕೆ ನಂಗೆ ಟೈಮ್ ಇಲ್ಲ ಇದರಲ್ಲಿ ಇದೆಲ್ಲ no way ....



ಆದರೆ ನೆನ್ನೆ ಏನಪ್ಪಾ ಆಯಿತು ಅಂದ್ರೆ!!!!, ನನ್ನ ಫ್ರೆಂಡ್ ಒಬ್ಬ ಕೆಲವೊಂದು ಫಿಲಂಸ್ ಡೌನ್ಲೋಡ್ ಮಾಡಿದೇನೆ ಬೇಕಾದರೆ ತೆಗೆದುಕೊಂಡು ಹೋಗು ಅಂತ ಹೇಳ್ದ,,, ನನಗೆ ಇಂಟರೆಸ್ಟ್ ಇರಲಿಲ್ಲ ಆದರು ಇರಲಿ ಯಾವಾಗ್ಲಾದ್ರು ಬೇಜಾರ್ ಆದಾಗ ನೋದೊದಗುತ್ತೆ ಅಂತ, ಎಲ್ಲ ನನ್ನ ಲ್ಯಾಪ್ಟಾಪ್ ಗೆ ಕಾಪಿ ಮಾಡಿಕೊಂಡೆ.....

ವೀಕ್ ಎಂಡ್ ಫ್ರೀ ಇದ್ದಾಗ ನೋಡೋಣ ಅಂತ ಸುಮ್ಮನೆ ಆಗಿದ್ದೆ... ಮೊನ್ನೆ friday ಆಫೀಸ್ ನಿಂದ ಬೇಗ ಬಂದಿದ್ದೆ, ಸರಿ ಮನೆಗೆ ಬಂದಾಗಲು ಕೆಲವೊಮ್ಮೆ ಆಫೀಸ್ ಕೆಲಸ ಇರುತ್ತೆ,, ರಾತ್ರಿ ಊಟ ಮುಗಿಸಿ, ಸ್ವಲ್ಪ ಹೊತ್ತು ಆಫೀಸಿನ ಕೆಲಸ ಮಾಡ್ಕೋತಾ ಕೂತಿದ್ದೆ...ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ ಆಗಲೇ 11 :00 ಆಗಿತ್ತು,,, ಸರಿ ಮಲ್ಕೊಳೋಣ ಅಂದ್ರೆ ಯಾಕೋ ನಿದ್ದೆ ಬರ್ತಾ ಇಲ್ಲ. ಸರಿ ಮೊನ್ನೆ ಕಾಪಿ ಮಾಡಿಕೊಂಡು ಬಂದಿದ್ದ ಯಾವುದಾದರು ಒಳ್ಳೆ ಫಿಲಂ ಇದೆಯೋ ನೋಡೋಣ ಅಂತ ಸರ್ಚ್ ಮಾಡಿದೆ,, ಒಂದು ೧೦ movies ಇತ್ತು,,, ಅದರಲ್ಲಿ ಒಂದು "Drag me to hell " ಇದರ ಬಗ್ಗೆ ಕೇಳಿದ್ದೆ, ನಮ್ಮ ಒಬ್ಬ ಇಂಡಿಯನ್ ಇದರಲ್ಲಿ ಮಾಡಿದ್ದಾನೆ . ತುಂಬ ಚೆನ್ನಾಗಿ ಇದೆ ಅಂತ,, ಸರಿ ಇದನ್ನೇ ನೋಡೋಣ ಅಂತ ನೋಡ್ತಾ ಇದ್ದೆ. ಫಿಲಂ ತುಂಬ ಇಷ್ಟ ಆಯಿತು,,, ಸಕತ್ ಭಯ ಕೂಡ ಅಗೋ ತರ ಇತ್ತು,, ನನಗೆ ಇದೇನು ಹೊಸದಲ್ಲ ಈ ತರಹದ ತುಂಬ movies ನೋಡಿದ್ದೇನೆ,,, ಇದು ಸ್ವಲ್ಪ ಜಾಸ್ತಿ ಎಫೆಕ್ಟ್ ಆಗಿ ಇತ್ತು,,,,ಸರಿ,,ಫಿಲಂ ಏನೋ ಮುಗಿತು,,ಆಗಲೇ ೧೨:೪೫ ಸರಿ ಮಲ್ಕೊಳೋಣ ಅಂತ ಅನ್ಕೊಂಡು ಲ್ಯಾಪ್ಟಾಪ್ off ಮಾಡಿ ಮಲ್ಕೊಂಡೆ....

ಸ್ವಲ್ಪ ಹೊತ್ತು ಆ ಫಿಲಂ ದೇ ಯೋಚನೆ,,,ಹಾಗೆ ಏನೇನೊ ಯೋಚನೆ ದೆವ್ವದ ಬಗ್ಗೆ,,,,ನಿದಾನಕ್ಕೆ ಕಣ್ಣು ಎಳ್ಕೊಂಡ್ ಹೋಗ್ತಾ ಇತ್ತು,,,,,ಸ್ವಲ್ಪ ಹೊತ್ತು ಆಗಿತ್ತು ಮಲಗಿ.....ಇದ್ದಕ್ಕೆ ಇದ್ದ ಹಾಗೆ ಏನೋ ಒಂದು ಸಣ್ಣ ಶಬ್ದಕ್ಕೆ ಎಚ್ಚರಿಕೆ ಆಯಿತು....ಏನೋ ಸೌಂಡ್ ಇರಬೇಕು ಅಂತ ಹಾಗೆ ಮಲ್ಕೊಂಡೆ, ಮತ್ತೆ ಅದೇ ಶಬ್ದ,,,horror ಮೂವಿ ನೋಡಿದ್ರಿಂದ ನೋ ಏನೋ,,, ಅದೇ trap ನಲ್ಲಿ ಇದ್ದೆ.. (ಕೆಲವೊಮ್ಮೆ ಹೀಗೆ ಆಗುತ್ತೆ,,, ಯಾವುದಾದರು ಮನಸ್ಸಿನ ಮೇಲೆ ಜಾಸ್ತಿ ಪ್ರಭಾವ ಬೀರಿದ್ದಾರೆ,, ಅದರ ಗುಂಗಿನಲ್ಲೇ ಇರುತ್ತೇವೆ) ಯಾವೊತ್ತು ಈ ತರ ಹಾಗಿರಲಿಲ್ಲ.. ಇವೊತ್ತು ಯಾಕೆ ಹೀಗೆ ಅನ್ಕೊಂಡು, ಲೈಟ್ ಹಾಕಿ ನೋಡಿದೆ ಏನು ಇಲ್ಲ,,, ಎಲ್ಲ ಸರಿಯಾಗೆ ಇದೆ,, ಮತ್ತೆ ಏನೋ ಟಪ್ ಅಂತ ಶಬ್ದ ಬಂತಲ್ವಾ ತುಂಬ ಹತ್ತಿರ ದಿಂದ ಕೇಳಿಸಿತು,,,ಅದು ಸುಳ್ಳ ?, ನಿಜ ಹಾಗಿದ್ರೆ ಎಲ್ಲಿಂದ ಬಂತು ಅಂತ ತಲೆಕೆಡಿಸಿಕೊಂಡು ಅಲ್ಲಿ ಇಲ್ಲಿ ನೋಡಿದೆ ಏನು ಸಿಗಲಿಲ್ಲ ,, ಸರಿ ಅಂತ ಹಾಗೆ ಸುಮ್ಮನೆ ಮಲ್ಕೊಂಡೆ.....

ಮಲಗಿ ಸ್ವಲ್ಪ ಹೊತ್ತು ಆಗಿರಲಿಲ್ಲ ಮತ್ತದೇ ಶಬ್ದ.....ಇವಗ್ಲಂತೂ ತಲೆನಲ್ಲಿ ಯಾವುದೊ ಹುಳ ಸೇರಿಕೊಂಡ ಹಾಗೆ ಆಯಿತು,,,,ಇದು ನನ್ನ ಭ್ರಮೇನ ಏನು ಅಂತ ಯೋಚಿಸ್ತಾ ಫುಲ್ alert ಆಗಿ, ಈ ನಿಶಬ್ದ ರಾತ್ರಿ ನಲ್ಲಿ ಅದು ನನ್ನ ರೂಂ ಒಳಗಡೆ ಇಂದ ಬರ್ತಾ ಇರೋ ಶಬ್ದಕ್ಕೆ ಹೊಂಚ್ ಹಾಕಿ ಕಂಡು ಹಿಡಿಲೇಬೇಕು ಅಂತ ಕೂತ್ಕೊಂಡೆ......ಸ್ವಲ್ಪ ಹೊತ್ತು ಆಯಿತು,,, ಇನ್ನು ಸ್ವಲ್ಪ ಹೊತ್ತು ಆಯಿತು ,,, ಯಾವ ಶಬ್ದನು ಪತ್ತೆ ಇಲ್ಲ.... ಸರಿ

ಹಾಗೆ ಕಣ್ಣು ಎಳ್ಕೊಂಡ್ ಹೋಗ್ತಾ ಇತ್ತು , ನಿದ್ರಾ ನಿದಾನಕ್ಕೆ ಬರ್ತಾ ಇತ್ತು,, ಅವಾಗ ಕೆಳಗಡೆ ಇಂದ, ಕಾಲೀ ತಳ್ಳೋ ಗಾಡಿಯ

ಜೋರು ಶಭ್ದಕ್ಕೆ ಎಚ್ಚರ ಆಯಿತು ಕಿಟಕಿ ಹತ್ರ ಹೋಗಿ ನೋಡಿದೆ... ಚಿಕನ್ ಕಾಬಬ್, ಮಾಡೋ ಒಂದು ತಗಡಿನ ಗಾಡಿ ನ ಯಾರೋ ಒಬ್ಬ ತಳ್ಕೊಂಡ್ ಹೋಗ್ತಾ ಇದ್ದ... ಇದು ನಮ್ಮ ಮನೆ ರೋಡಿನಲ್ಲಿ ಪ್ರತಿ ದಿನ ರಾತ್ರಿ,, ತಳ್ಕೊಂಡ್ ಹೋಗ್ತಾನೆ , ಸರಿ ಇದಕ್ಕೆ ಯಾಕೆ ಇವೊತ್ತು ಇಸ್ತೊಂದ್ ಎಚ್ಚರ ಆಗ್ತಾ ಇದೆ.. ಇದರ ಬಗ್ಗೆ ಯಾಕೆ ಇಸ್ತೊಂದ್ ತಲೆ ಕೆಡಿಸಿ ಕೊಳ್ತಾ ಇದೇನೇ ಅಂತ ಅನ್ಕೊಂಡ್ ಮಲ್ಕೊಂಡೆ,,, ನನ್ನ ಮೊಬೈಲ್ ನ ಯಾವಾಗಲು ನನ್ನ ಪಕ್ಕನೆ ಇಟ್ಕೊಂಡ್ ಮಲ್ಕೊತೇನೆ,,, ನಿದ್ದೆ ಬರಲಿಲ್ಲ ಅಂತ ಯಾವುದೊ songs ಕೇಳ್ತಾ ಹಾಗೆ ಬಿಟ್ಟಿದ್ದೆ. ಅದರ hands ಫ್ರೀ, ಬಿಚ್ಚಿ ಹೋಗಿತ್ತು,,, songs list ಹಾಗೆ ಸೆಲೆಕ್ಟ್ ಆಗಿತ್ತು ಅಂತ ಕಾಣುತ್ತೆ ಮೊಬೈಲ್ ಪಕ್ಕದಲ್ಲೇ ಇತ್ತಲ್ವ,,,ಸ್ವಲ್ಪ ಟಚ್ ಆಗಿ,,"ಓಹ್ ಓಹೋ ಹೋಓಒ ತಂಗಾಳಿ ಯಲ್ಲಿ ನಾನು ತೇಲಿ ಬಂದೆ " ಈ ಹಾಡೇ ಬರಬೇಕ,,,,!!! ಅದು ಫುಲ್ ಲೌಡ್ ಸ್ಪೀಕರ್ ನಲ್ಲಿ, ಇದು ಕಾಕತಳೆಯವೋ, ಏನೋ,,, ನಂಗಂತೂ,, ನಿಜವಾಗ್ಲೂ ಏನೋ ಒಂದು ತರ ವಿಚಿತ್ರ ಅನುಭವ....ನಾನು ಯಾವೊತ್ತು ದೆವ್ವ ಬೂತ ಅಂತ ನಂಬೋದಿಲ್ಲ... ಹಾಗೆ ಎಸ್ಟೋ ಸಲ ನೈಟ್ ದೆವ್ವದ ಪಿಕ್ಚರ್ ನೋಡಿ ಮಲ್ಕೊಂಡ್ ಇದೇನೇ,, ಇವೊತ್ತು ಯಾಕೆ ಇಸ್ತೊಂದ್ ವಿಚಿತ್ರವಾಗಿ ಆಗ್ತಾ ಇದೆ ಅಂತ ನಂಗೆ ಆಶ್ಚರ್ಯ.....!!!! ಇದೆಲ್ಲ ಏನೋ ನನ್ನದೇ ಬ್ರಮೆ,,, ಏನು ಇಲ್ಲ ಸುಮ್ನೆ ನಾನೇ ಏನೇನೊ ಅನ್ನ್ಕೊಥ ಇದೇನೇ ಅಂತ ಧೈರ್ಯ ಮಾಡಿ,,, ಕಿವಿಗೆ ಹತ್ತಿ ಇಟ್ಕೊಂಡ್ ಮಲ್ಕೊಂಡೆ.....

ಶನಿವಾರ ಬೆಳಿಗ್ಗೆ ಕ್ರಿಕೆಟ್ ಆಡೋ ಅಭ್ಯಾಸ,,, ಅದರ ನನ್ನ frnds ಇವೊತ್ತು ಫೋನ್ ಮಾಡಿ ಎಬ್ಬಿಸಲಿಲ್ಲ ರಾತ್ರಿ ತುಂಬ ತಡವಾಗಿ ಮಲ್ಕೊಂಡ್ ಇದ್ದಕ್ಕೆ ಬೆಳಗ್ಗೆ ಲೇಟ್ ಆಗಿ ಎಚ್ಚರ ಆಯಿತು... ಬೆಳಿಗ್ಗೆ ಎದ್ದಾಗ,,ಸ್ವಲ್ಪ ಹೊತ್ತು ನೆನ್ನೆ ರಾತ್ರಿ ಆದ ಅನುಭವದ್ದೆ ಯೋಚನೆ,, ಯಾಕೆ ಹೀಗೆ ಆಯಿತು... ಏನು ಇಲ್ಲ ಅಂದ್ರೆ ತಪ ತಪ ಅಂತ ಜೋರ್ ಆಗಿ ಶಬ್ದ ಬಂದಿದ್ದು ಸುಳ್ಳ... ಇದು ನನ್ನ ಬ್ರಮೆನ....ಏನೋ ಇರಬೇಕು ಇದಕ್ಕೆ ಯಾಕೋ ಇಸ್ತೊಂದ್ ಇಂಟರೆಸ್ಟ್ ಕೊಡಬೇಕು ಅಂತ ಮರೆತು ನನ್ನ ವೀಕ್ ಎಂಡ್ ಪ್ಲಾನ್ಸ್ ಬಗ್ಗೆ ಥಿಂಕ್ ಮಾಡ್ತಾ ಎದ್ದು ಹೋದೆ....



ಮುಂದುವರಿಯುವುದು.......

(ಶನಿವಾರ ರಾತ್ರಿನೂ ಅದೇ ತರಹದ ಟಪ್ ಅಂತ ಜೋರಾಗಿ ಕೀಳಿಸ್ತ ಇರೋ ಶಬ್ದ... !!!ಇವೊತ್ತು ಎರಡರಲ್ಲಿ ಒಂದು ತೀರ್ಮಾನ ಆಗಬೇಕು,, ಇದು ಏನು ಎಲ್ಲಿಂದ ಬರ್ತಾ ಇದೆ,, ಅದು ಯಾಕೆ ಹೀಗೆ sudden ಆಗಿ ನನ್ನ ತಲೆ ತಿಂದ ಇದೆ.. ಕೊನೆಗೂ, ಈ ಭೂತ ಚೀಸ್ಟೇ ನ ರಾತ್ರಿ ಎಲ್ಲ ಎದ್ದು ಕಂಡುಹಿಡಿದ ರೀತಿ ...... ಮುಂದಿನ ಪೋಸ್ಟ್ ನಲ್ಲಿ )
 
(Photo :- Internet )

9 comments:

  1. ಗುರು,

    ನಮ್ಮ ಅಜ್ಜಿ ಹೇಳ್ತಿರ್ತಾರೆ, ಈ ಬೆಂಗಳೂರು ಎಷ್ಟು ಹಾಳಾಗಿದೆ ಅಂದ್ರೆ, ದೆವ್ವ ಭೂತಗಳೂ ಇಲ್ಲಿಗೆ ಬರಲ್ಲ ಅಂತ.
    ನೀವು ಹೆದರಬೇಕಾಗಿಲ್ಲ. ಅವುಗಳಿಗೆ ನಮ್ಮನ್ನು ಕಂಡರೆ ಇನ್ನೂ ಹೆಚ್ಚು ಭಯ ;-)
    ಕ್ಲೈಮಾಕ್ಸ್ ಏನಾಯಿತೆಂದು ಬೇಗ ಹೇಳಿ.

    ReplyDelete
  2. chennaagide... kaMduhididaddannu tiLisi kaayuttalirutteve..haha

    ReplyDelete
  3. ಗುರು,

    ತುಂಬ ಕುತೂಹಲವೆನ್ನಿಸುತ್ತಿದೆ...ನಿಮಗಾದ ಅನುಭವವನ್ನು ನೋಡಿದ್ರೆ...ಬಹುಶಃ ಅದು ಹೊಂಚುಹಾಕುತ್ತಿರಬಹುದು. ಮುಂದೇನಾಯ್ತು ಕಾಯುತ್ತಿದ್ದೇನೆ..

    ReplyDelete
  4. ಇಂಟರೆಸ್ಟಿಂಗ್ ಆಗಿದೆ ಭೂತದ ಕಥೆ ! ಬೇಗ ಬೇಗ ಮುಂದುವರೆಸಿ. ಕುತೂಹಲ ಜಾಸ್ತಿ ಆಗ್ತಾ ಇದೆ !

    ReplyDelete
  5. ಕಥೆ ಚೆನ್ನಾಗಿದೆ. ಮು೦ದಿನ ಕ೦ತನ್ನು ಬೇಗ ಹಾಕಿ.

    ReplyDelete
  6. tumba chennagide kathe....mundina kantige kayta iddini :)

    ReplyDelete
  7. ಕುತೂಹಲಕಾರಿಯಾಗಿದೆ

    ReplyDelete
  8. ಸರ್,
    ಸುಮ್ನೆ ಕುತೂಹಲ ಹುಟ್ಟಿಸಿ ಮುಂದುವರೆಸ್ತಿದಿರ
    ಕಾಯ್ತೀನಿ ಮುಂದಿನ ಭಾಗಕ್ಕೆ

    ReplyDelete
  9. @ರಾಜೀವ
    , @ಮನಸು , @ಶಿವೂ , @ಚಿತ್ರ, @ಮನಮುಕ್ತಾ , @ಸ್ನೌ ವೈಟ್, @ದೀಪಸ್ಮಿಥ, @ಗುರು ಸರ್,, . ಪ್ರತಿಕ್ರಿಯಿಸಿರುವ ಎಲ್ಲರಿಗೂ ನನ್ನ ಧನ್ಯವಾದಗಳು,,,,,, ಮುಂದಿನ ಭಾಗವನ್ನು ಅದಸ್ಟು ಬೇಗ ಹಾಕುತ್ತೇನೆ.... :-)

    ReplyDelete